28/12/2025
ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ದಿನಾಂಕ: 17.12.2025 ರಂದು ಮುಳಬಾಗಿಲು ನಗರಸಭೆ ವತಿಯಿಂದ ವಸತಿ ರಹಿತರ ಸಮೀಕ್ಷೆಯನ್ನು ಕೈಗೊಳ್ಳಲಾಯಿತು, ಕೆ ಜಿ ಎಫ್ ರಸ್ತೆಯಲ್ಲಿನ ದರ್ಗಾ, ಸೋಮೇಶ್ವರ ದೇವಸ್ಥಾನ, ವಿಠಲ ನಾರಾಯಣಸ್ವಾಮಿ ದೇವಸ್ಥಾನ, ಆಂಜನೇಯ ಸ್ವಾಮಿ ದೇವಸ್ಥಾನದ ಸುತ್ತಲೂ, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಬಜಾರು ಬೀದಿ, ಸೌಂದರ್ಯ ಸರ್ಕಲ್, ನಂಗಲಿ ರಸ್ತೆ ರಾಮಸಂದ್ರ ರಸ್ತೆ ಇತ್ಯಾದಿ ಸ್ಥಳಗಳಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಾಯಿತು, ಈ ಸಂದರ್ಭದಲ್ಲಿ ಶ್ರೀ ಬಿ ಶಶಿಕುಮಾರ್ ಸಮುದಾಯ ಸಂಘಟನಾಧಿಕಾರಿ, ಶ್ರೀ ನಾಗರಾಜ್ ವಿ ಕಂದಾಯ ನಿರೀಕ್ಷಕರು, ಶ್ರೀ ಮೊಹಮ್ಮದ್ ಆಜಾಂ ಕಂದಾಯ ನಿರೀಕ್ಷಕರು, ಶ್ರೀಮತಿ ವಂದನ ಆರ್ ಸಮುದಾಯ ಸಂಪನ್ಮೂಲ ವ್ಯಕ್ತಿ, ಶ್ರೀಮತಿ ಮಾಧುರಿ ಜಿ ಸಮುದಾಯ ಸಂಪನ್ಮೂಲ ವ್ಯಕ್ತಿ, ಶ್ರೀಮತಿ ಪಲ್ಲವಿ ಬಾಯಿ ಸಮುದಾಯ ಸಂಪನ್ಮೂಲ ವ್ಯಕ್ತಿ, ಶ್ರೀ ಮುನಿವೆಂಕಟಪ್ಪ ಮೇಸ್ತ್ರಿ, ಶ್ರೀ ಜಯಚಂದ್ರ ಮೇಸ್ತ್ರಿ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದರು, 3 ಜನ ಪುರುಷರು ಮತ್ತು 3 ಮಹಿಳೆಯರು ಒಟ್ಟು 6 ಜನರನ್ನು ಗುರುತಿಸಲಾಯಿತು.