05/09/2026
ಸಮಾಜದ ಭವಿಷ್ಯವನ್ನು ರೂಪಿಸುವ ರೂವಾರಿಗಳಾದ ನಾಡಿನ ಸಮಸ್ತ ಶಿಕ್ಷಕ ವೃಂದಕ್ಕೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
ಅಜ್ಞಾನದ ಅಂಧಕಾರವನ್ನು ಕಳೆದು ಜ್ಞಾನದ ಜ್ಯೋತಿಯನ್ನು ಬೆಳಗುವ ನಿಮ್ಮ ನಿಸ್ವಾರ್ಥ ಸೇವೆಗೆ ಹಾಗೂ ಶಿಕ್ಷಣವೇ ರಾಷ್ಟ್ರದ ಪ್ರಗತಿಗೆ ಬುನಾದಿ ಎಂದು ನಂಬಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಆದರ್ಶಗಳಿಗೆ ನನ್ನ ಅನಂತ ನಮನಗಳು. ಸುಭದ್ರ ಹಾಗೂ ಸುಶಿಕ್ಷಿತ ಸಮಾಜ ನಿರ್ಮಾಣಕ್ಕಾಗಿ ದುಡಿಯುತ್ತಿರುವ ಪ್ರತಿಯೊಬ್ಬ ಗುರುವಿಗೂ ನಾವೆಲ್ಲರೂ ಸದಾ ಗೌರವ ಸಲ್ಲಿಸೋಣ