15/08/2015
ನನ್ನ ಒಬ್ಬ ಸ್ನೇಹಿತ ಸ್ವಾತಂತ್ರೋತ್ಸವ ವನ್ನು ನೆನಪಿಸುವ ಕವನದೊಂದಿಗೆ ಹೀಗೆ ಹೇಳುತ್ತಾನೆ :
{ sare jaha se accha hindusta,n hamara..
hum bul-bule hain iski ye gulistan hamara..
"{ Lahra raha hai jbse isme'n jari ka parcham jhuk jhuk ke dekhta hai mulk asma'n hamara.}"
ಬಾನಿನಲ್ಲಿ ತ್ರಿವರ್ಣ ಧ್ವಜ ಹಾರಾಡುತಿರೆ ಎಲ್ಲೆಡೆ ;
ಆಕಾಶ ಬಗ್ಗಿ ಬಗ್ಗಿ ನೋಡುತಿಹುದು , ಹಿಗ್ಗುತಿಹುದು ಕಂಡು ಭೂಮಿಯ ಅಂದ ಪಸರಿಸಿಹುದು ಎಲ್ಲೆಡೆ ;
ಕೆಂಪು ಕಿರಣ ಹೊನ್ನ ಬಣ್ಣ ನಮ್ಮ ವೀರ ಕುವರರದು ;
ದೇಶಕ್ಕಾಗಿ ಪ್ರಾಣ ತೆತ್ತ ಬಿಸಿರಕ್ತದ
ಯುವಕರದು ;
ಬಿಳಿಯ ಬಣ್ಣ ನೋಡಿರಣ್ಣ ಶಾಂತಿದೂತ ಸೈನ್ಯವದು ;
ಗಾಂಧಿ , ಗಡಿನಾಡು ಗಾಂಧೀ, ಏಟು ತಿಂದ ತಿಲಕರದು ;
ಹಸಿರು ನಮ್ಮ ಉಸಿರು ಅದು ಎಂದೂ ಪೂರಕ ನಮ್ಮ ಬಾಳ್ವೆಗೆ ;
ಕೂಡಿಬಾಳಲು ಸ್ವರ್ಗಸುಖ ಅದರಲ್ಲೇ ಇರುವುದು ನಮ್ಮ ದೇಶದ ಏಳಿಗೆ .
ಹಾಗೆಯೇ ಕೆಲವು ಅನ್ಧಶ್ರಧರಿಗೊಸ್ಕರ ಪ್ರವಾದಿ ಮೊಹಮ್ಮೆದ್ ರವರ ಉಕ್ತಿಯನ್ನು ಉಲ್ಲೇಖಿಸುತ್ತಾ ಹೇಳುತ್ತಾನೆ:
"Hubbul watan nisful iman..
Watan ki muhabbat aadha iman hai."
ನೀನು ನಿನ್ನ ದೇಶವನ್ನು ಪ್ರೀತಿಸು,
ಗೌರವಿಸು , ಅದುವೇ ನಿನ್ನಯ ಧರ್ಮದ ಕುರುಹು ಮತ್ತು ಬುನಾದಿ.
ಸರ್ವರಿಗೂ ಸ್ವಾತಂತ್ರೋತ್ಸವದ ಶುಭಾಶಯಗಳು ,
ಸಾಧ್ಯವಾದರೆ ಎಲ್ಲಾದರೊಂದುಕಡೆ
ಧ್ವಜಾರೋಹಣ ಪ್ರತಿನಿಧಿಸಿ.
ಅದು ನಿಮ್ಮ ಆತ್ಮಬಲ ಮತ್ತು ದೇಶಪ್ರೇಮ ಹೆಚ್ಹಿಸುತ್ತದೆ.
WISH YOU ALL A VERY HAPPY INDEPENDENCE DAY!!!!