23/06/2023
ಗಡಿನಾಡ ಸಿಂಹಿಣಿ, ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಮೊದಲ ಮಹಿಳೆ, ಕೆಚ್ಚೆದೆಯ ಕನ್ನಡತಿ
*"ಶರಣೆ ಜಯದೇವಿತಾಯಿ ಲಿಗಾಡೆ"*
ಗಡಿಕನ್ನಡದ ಉಳಿವು
ಕನ್ನಡ ಹೋರಾಟಗಳೆಂದರೆ ಅರ್ದ ರಾತ್ರಿಯಾದರು ಸರಿಯೇ ದಂಡು ಸೇರಿಸಿ ಕನ್ನಡ ವಿರೋಧಿಗಳನ್ನ ಬಗ್ಗುಬಡಿಯುತ್ತಿದ್ದ 'ಗಡಿನಾಡ ಸಿಂಹಿಣಿ' ಜಯದೇವಿತಾಯಿ ಲಿಗಾಡೆ ಹುಟ್ಟಿದ್ದು 'ಜೂನ ೨೩' ರಂದು ಹೀಗಾಗಿ ಈ ಸಂಪೂರ್ಣ ತಿಂಗಳನ್ನ ಈ ತಾಯಿಯನ್ನ ನೆನೆಯುತ್ತ ಅವರ ಬಗ್ಗೆ ತಿಳಿಯುತ್ತ ಕಳೆಯೋಣ, ಕನ್ನಡದ ಕ್ರಾಂತಿಯ ದೀಪಗಳು ಹೇಗೆ ಜಗಮಗಿಸಿ ಮುಂದಿನ ಪೀಳಿಗೆಯು ಸರಿದಾರಿಯಲ್ಲಿ ನಡೆಯಲು ಬೆಳಕನ್ನ ಚೆಲ್ಲಿದ ಈ ನಿಸ್ವಾರ್ಥ ಮಹಾಚೇತನಗಳು ಕನ್ನಡದ ಹಿರಿಮೆ.
೧೯ರ ದಶಕದಲ್ಲಿ ಮರಾಠಿ ಪ್ರಬಲ್ಯವಿದ್ದ ನಾಡಲ್ಲಿ, ಕರ್ನಾಟಕ, ಕನ್ನಡ ಮತ್ತು ಕನ್ನಡ ಜನರಿಗೋಸ್ಕರ ದೂರದ ಗಡಿ ಸೊಲ್ಲಾಪುರದಲ್ಲಿ ನಿಂತು ಗುಟುರು ಹಾಕಿ ಕನ್ನಡಿಗರ ಕೋಟೆ ಕಟ್ಟಿ ಅದನ್ನ ರಕ್ಷಣೆ ಮಾಡಿದ ಅಪ್ರತಿಮ ಹೋರಾಟಗಾರ್ತಿ ಗಡಿನಾಡ ಧೀರೋದ್ದಾತ ಮಹಿಳೆ ಗಡಿನಾಡ ಹುಲಿ ಬಿರುದಾಂಕಿತೆ ಜಯದೇವಿತಾಯಿ ಲಿಗಾಡೆ. ಆಧ್ಯಾತ್ಮ ಚಿಂತನಕಾರರು. ಕುಟುಂಬವತ್ಸಲೆ, ಸಾಹಿತ್ಯಸಾಧಕಿ, ಸಮಾಜಸೇವಕಿ ಹೀಗೆ ತ್ರಿವೇಣಿ ಸಂಗಮವಾಗಿದ್ದ ಈ ಜಂಗಮತಾಯಿ ತಾಯ್ನುಡಿಯ ಸೇವೆಗಾಗಿ ಸವೆದರು. ಕನ್ನಡ ನುಡಿಗೆ, ಕನ್ನಡ ನಾಡಿಗೆ ತನ್ನನ್ನು ಅರ್ಪಿಸಿಕೊಂಡು ಅಜರಾಮರ ಕೀರ್ತಿಪಾತ್ರರಾದ ಶ್ರೀಮತಿ ಜಯದೇವಿ ತಾಯಿ ಲಿಗಾಡೆ ಅವರ ಜೀವನ ದರ್ಶನವೆಂದರೆ ಅದೊಂದು ಯಶೋಗಾಥೆ.
ಕನ್ನಡ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷೆ, *‘ಗಡಿನಾಡ ದುರ್ಗಾ’* ಎಂದು ಬಿರುದಾಂಕಿತರಾಗಿರುವ ಅಖಂಡ ಕರ್ನಾಟಕದ ಕನಸು ಕಂಡು, ಕರ್ನಾಟಕದ ಏಕೀಕರಣಕ್ಕಾಗಿ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಾ, ಕನ್ನಡನಾಡು-ನುಡಿಗಾಗಿ ದುಡಿಯುತ್ತ ಬರಿ ಮಾತಲ್ಲೇ ಹೇಳದೆ ಕೃತಿಯಲ್ಲಿ ಮಾಡಿ ತೋರಿಸಿದ ಗಟ್ಟಿಗಿತ್ತಿ.
ಬೆಳಗಾವಿಯಂಥ ಗಡಿ ಪ್ರದೇಶದಲ್ಲಿ ಕನ್ನಡದ ಗುಡಿ ಕಟ್ಟಲು ಮತ್ತು ರಕ್ಷಣೆ ಮಾಡಲು ಹೋರಾಡಿದ ಅಪ್ರತಿಮ ಹೋರಾಟಗಾರ್ತಿ, ಮಹಾರಾಷ್ಟ್ರದಲ್ಲಿ ಕನ್ನಡ ಪ್ರಧಾನವಾಗಿರುವ ಸೋಲ್ಲಾಪುರ, ಅಕ್ಕಲಕೋಟೆ, ಜತ್ತ, ಜೊತೆಗೆ ಕೇರಳದ ಕಾಸರಗೋಡು ಹಾಗೂ ಇತರ ಕನ್ನಡ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಅವರ ಜೀವನದುದ
ಈ ರೀತಿಯ ಹೆಚ್ಚಿನ ಪೋಸ್ಟ್‌ಗಳನ್ನು ನೋಡಲು ಮತ್ತು ಕನ್ನಡ ಸಾಹಿತ್ಯ ಪರಿಷತ್ತು ಬಳಗ ಸೇರಲು, ಇಲ್ಲಿ ಕ್ಲಿಕ್ ಮಾಡಿ
SHIVARUDRAIAH SWAMY