09/07/2026
ಯಾರು ಬೇಕಿತ್ತು ನಿಮಗೆ? ಬಾಗಿಲು ತೆರೆದ ಹರಯದ ಹುಡುಗಿ ಕೇಳಿದಳು. ರವಿತೇಜನ ನೋಟ ಅವಳ ಮೇಲೆ ನಿಂತಿತು. ಕೃಷ್ಣವರ್ಣ ದುಂಬಿ ಕಣ್ಣುಗಳು ಎಡಭಾಗದ ಕೆಳ ತುಟಿಯ ಕೆಳಗಿರುವ ಸಣ್ಣ ಕಪ್ಪು ಮಚ್ಚೆ ಒಂಥರಾ ಅವನನ್ನು ಸೆಳೆಯಿತು. ರಾಜ್ಯಮಟ್ಟದ ವರ್ಷದ ಚಿತ್ರಕಲಾ ರತ್ನ ಪ್ರಶಸ್ತಿ ವಿಜೇತ ರವಿತೇಜನಿಗೆ ಬೆಂಗಳೂರಿನ ಚಿತ್ರಕಲಾ ಪರಿಷತ್ತಿನಲ್ಲಿ ಗೌರವ ಉಪನ್ಯಾಸಕನಾಗಿ ಕೆಲಸ ಸಿಕ್ಕಿತ್ತು. ಸಾಹುಕಾರ ರಾಮಚಂದ್ರರವರ ಸಹಾಯದಿಂದ ಕೈಗಾರಿಕೋದ್ಯಮಿ ಜಗನ್ನಾಥ್ ಅವರ ಬೃಹತ್ ಬಂಗಲೆಯ ಔಟ್ ಹೌಸ್‌ನಲ್ಲಿ ವಾಸಿಸಲು ಬಂದಿದ್ದ. ಜಗನ್ನಾಥ್ ಸರ್ ಇದ್ದಾರಾ? ರವಿತೇಜ ಮೆಲ್ಲಗೆ ಕೇಳಿದ. ಹೋ ರಾಮಚಂದ್ರ ಅಂಕಲ್ ಕಳಿಸಿದ ರವಿತೇಜ ನೀವೇನಾ? ಬನ್ನಿ ಒಳಗೆ. ಅವಳು ಬಾಗಿಲನ್ನು ವಿಶಾಲವಾಗಿ ತೆರೆದಳು. ಕೂತ್ಕೊಳ್ಳಿ. ಅಪ್ಪಾಜಿ ಹೊರಗಡೆ ಹೋಗಿದ್ದಾರೆ. ನಿಮಗೆ ಕುಡಿಯಲು ನೀರು ಬೇಕಾ? ಅವಳ ಸರಳತೆ ನೇರ ಮಾತು ರವಿತೇಜನಿಗೆ ಅಚ್ಚರಿ. ನೀರು ಕೊಡಿ ಮೇಡಂ. ಏನು.... ಮೇಡಂ ಅಂತ ಕರೆದ್ರಾ...? ನನ್ ಹೆಸರು ಜಾಹ್ನವಿ ಅಂತ. ಎಲ್ರು ಜಾನು ಜಾನು ಅಂತ ಕರೆಯೋದು. ನಿಮಗೇನು ಅಭ್ಯಂತರ ಇಲ್ಲಾಂದ್ರೆ ನೀವೂ ಹಾಗೇ ಕರೀಬಹುದು. ಅದೂ ಬಿಟ್ಟು ಈ ಮೇಡಂ ಗೀಡಂ ಅಂತೆಲ್ಲ ಕರೆಯೋದು ಬೇಡ. ಎದೆಯ ಮೇಲಿದ್ದ ನೀಳ ಜಡೆಯನ್ನು ಹಿಂದಕ್ಕೆ ಹಾಕಿ ಹೇಳಿದಳು. ಅವರು ಇವತ್ತು ಬರೋದಿಲ್ಲ. ಇಲ್ಲೊಂದು ಮೀಟಿಂಗ್ ಮುಗಿಸಿ ಸಂಜೆ ಮುಂಬೈಗೆ ಹೋಗ್ತಾ ಇದ್ದಾರೆ. ನಾಳೆ ಸಂಜೆ ಅಥವಾ ನಾಡಿದ್ದು ಬೆಳಿಗ್ಗೆ ಮನೆಗೆ ಬರಬಹುದು. ಜಗನ್ನಾಥ್ ಇಲ್ಲವೆಂಬ ಮಾತು ರವಿತೇಜನನ್ನು ತಬ್ಬಿಬ್ಬುಗೊಳಿಸಿತು. ಬನ್ನಿ ನಿಮಗೆ ಔಟ್ ಹೌಸ್ ತೋರಿಸುತ್ತೇನೆ. ಮನೆಯ ಹಿಂದಿದ್ದ ಔಟ್ ಹೌಸ್ ಒಂದು ಪುಟ್ಟ ಬಂಗಲೆಯಂತಿತ್ತು. ಒಬ್ಬ ಇರುವುದಕ್ಕೆ ಇಷ್ಟು ದೊಡ್ಡ ಮನೆಯಾ? ರವಿತೇಜ ಕೇಳಿದ. ಜಾಹ್ನವಿ ನಕ್ಕಳು. ಅಲ್ರಿ ನಿಮ್ಮನ್ನು ಒಬ್ನೇ ಇರಿ ಅಂತ ಹೇಳಿದವರು ಯಾರು? ನೀವು ನಿಮ್ಮ ಹೆಂಡತಿ ಮಕ್ಳನ್ನು ಕರ್ಕೊಂಡು ಬಂದ್ರೂ ನಮ್ಮ ಒಬ್ಜೆಕ್ಷನ್ ಏನೂ ಇಲ್ಲ. ಅವಳ ಗಲ್ಲದಲ್ಲಿ ಮೂಡಿದ ಗುಳಿ ರವಿತೇಜನ ನೋಟವನ್ನು ಸೆಳೆಯಿತು. ಇಷ್ಟು ಬೇಗ ಸುಸ್ತಾದ್ರೆ ಹೇಗ್ರಿ? ನೀವು ಸುಸ್ತಾಗೋಕೆ ಈ ಮನೆಯಲ್ಲಿ ಇನ್ನೂ ಏನೇನು ಇದೆಯೋ ಮುಂದೆ ನೋಡೋಣ. ಮಧ್ಯಾಹ್ನ ಊಟಕ್ಕೆ ತಡವಾಗಿ ಬಂದ ರವಿತೇಜನನ್ನು ಡೈನಿಂಗ್ ಟೇಬಲ್ ಬಳಿ ಸೌಟು ಹಿಡಿದು ನಿಂತಿದ್ದ ಜಾಹ್ನವಿ ಗದರಿದಳು. ಏನ್ರಿ ಊಟಕ್ಕೆ ಬನ್ನಿ ಅಂತ ಹೇಳಿ ಬಂದ್ರೆ ಕರ್ಕೊಂಡು ಬರೋಕೆ ಜನ ಬೇಕಾ ನಿಮಗೆ? ನಾಳೆಯಿಂದ ಮನೆಯಲ್ಲಿ ಇದ್ರೆ ಮದ್ಯಾಹ್ನ ಒಂದೂವರೆಗೆ ಸರಿಯಾಗಿ ಡೈನಿಂಗ್ ಟೇಬಲ್ ಹತ್ರ ಇರ್ಬೇಕು. ಮತ್ತೆ ಡೈಲಿ ರಾತ್ರಿ ಎಂಟು ಗಂಟೆಗೆ ಊಟಕ್ಕೆ ಹಾಜರ್ ಆಗ್ಬೇಕು. ಅರ್ಥ ಆಯ್ತಾ? ಸೌಟು ಮುಖದ ಮುಂದೆ ಹಿಡಿದು ಹೇಳಿದಾಗ ರವಿತೇಜ ತಲೆ ಅಲ್ಲಾಡಿಸಿ ಮೆಲ್ಲಗೆ ಆಯ್ತು ಮೇಡಂ ಎಂದ. ಯಾರೀಕೆ ಜಾಹ್ನವಿ? ಜಗನ್ನಾಥ್ ಇಲ್ಲದ ಈ ಬೃಹತ್ ಮನೆಯಲ್ಲಿ ಈ ನೇರ ಮಾತಿನ ಹುಡುಗಿಯೊಂದಿಗೆ ರವಿತೇಜನ ಹೊಸ ಜೀವನ ಹೇಗೆ ಸಾಗಲಿದೆ? ಅವನ ಕಲ್ಪನೆಯ ಬೃಂದಾವನದ ಹುಡುಗಿಗೂ ಇವಳಿಗೂ ಏನಾದರೂ ಸಂಬಂಧವಿದೆಯೇ?
ಈ ಕಥೆಯನ್ನು ಪೂರ್ತಿಯಾಗಿ ಓದುವ ಆನಂದ ನಿಮ್ಮದಾಗಿಸಿಕೊಳ್ಳಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ...
ಆ ಕ್ಯಾನ್ವಾಸ್ ಮೇಲೆ ಮೂಡಿದ ದೃಶ್ಯವು ಒಂದು ಸುಂದರ ಕಾವ್ಯದಂತಿತ್ತು. ಮಂಜು ಮುಸುಕಿದ ಮುಂಜಾನೆ... ಚಿತ್ರದ ಮಧ್ಯಭಾಗದಲ್ಲಿ ಮಂಜಿನೆಡೆ....