FAST TV Kannada

FAST TV Kannada ಫಾಸ್ಟ್ ನ್ಯೂಸ್ ಹಾಸನ ಜಿಲ್ಲಾದ್ಯಂತ ನಿಮ್ಮ

U DIGITAL Channel No. 192
M DIGITAL Channel No. 75
NXT DIGITAL Channel NO. 87
ನೈಜ ಸುದ್ದಿ

02/06/2026

ಹಾಸನ‌ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಶುಭಂ ಶುಕ್ಲ.. ಐಎಎಸ್ ರವರು ಇಂದು ಹಾನುಬಾಳು ಗ್ರಾಮ ಪಂಚಾಯಿತಿ ಕಚೇರಿ ಭೇಟಿ‌ ನೀಡಿದರು.. ಕಚೇರಿಯಲ್ಲಿ ಡಿಜಿಟಲ್ ಗ್ರಂಥಾಲಯ ಮತ್ತು ಘನ ತ್ಯಾಜ್ಯ ವಿಲೇವಾರಿ ಘಟಕ‌ ಪರಿಶೀಲಿಸಿದರು.. ಹಾಗೂ‌ಹಾನುಬಾಳು ಗ್ರಾಮ ಪಂಚಾಯಿತಿಯಲ್ಲಿರುವ ಕೆಪಿಎಸ್ ಶಾಲೆಯನ್ನು ಭೇಟಿ‌ ಮಾಡಿದರು.. ಹಳೆ ವಿಧ್ಯಾರ್ಥಿಗಳು ಮತ್ತು ಸರ್ಕಾರ ಮತ್ತು ಗ್ರಾಮ ಪಂಚಾಯಿತಿಯಿಂದ ಕೈಗೊಂಡಿರುವ ಅಭಿವೃದ್ದಿ ಕಾರ್ಯಕಗಳನ್ನು ಪ್ರಶಂಸಿದರು... ಹಾಗೂ ಮಧ್ಯಾನದ ಊಟ ಕೆಪಿಎಸ್ ಶಾಲೆ ಎಲ್‌ಕೆಜಿ ಯುಕೆಜಿ ಪುಟಾಣಿಗಳೊಂದಗೆ ಸೇವಿಸಿ ಊಟದ ವ್ಯವಸ್ಥೆ ಹರ್ಷ ವ್ಯಕ್ತಪಡಿಸಿದರು.. ಈ ಸಂದರ್ಭದಲ್ಲಿ ಸಹಾಯಕ‌ನಿರ್ದೇಶಕರುಗಳಾದ ಆದಿತ್ಯ ಹೆಚ್ ಎ., ಹರೀಶ್ ಕೆ ಪಿಡಿಓ ಮತ್ತು ಸಹಾಯಕ ನಿರ್ದೇಶಕರು ತಾ ಪಂ ಸಕಲೇಶಪುರ.. ಎಸ್ ಡಿ ಎಂಸಿ‌ ಅಧ್ಯಕ್ಷರು ಅಣ್ಣು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಚಂದ್ರಣ್ಣ, ಮೋಹನ್ ರೆಹೆಮಾನ್ ಮತ್ತುಗ್ರಾಮ ಪಂಚಾಯಿತಿ ಕಾರ್ಯದರ್ಶಿ ಮತ್ತು ಸಿಬ್ಬಂದಿ ಹಾಜರಿದ್ದರು

02/06/2026

ಹಾಸನ.
ಹಬ್ಬದ ದಿನವೇ ಪತ್ನಿಯನ್ನ ಕೊಂದ ಪಾಪಿ ಪತಿ

ಬಕ್ರೀದ್ ಹಬ್ಬದ ದಿನವೇ ಕೊಲೆಯಾದ ಗುಲ್‌ಶರ್ ಬಾನು

ಸೈಫ್ ಉಲ್ಲಾ ಕೊಲೆ ಮಾಡಿರೋ ಪಾಪಿ ಪತಿ

ಹಾಸನ ಜಿಲ್ಲೆ ಚನ್ನರಾಯಪಟ್ಟಣದ ಕಂಚಗಾರ ಬೀದಿಯಲ್ಲಿ ಘಟನೆ

ಮೊದಲಿನಿಂದಲೂ ಪತ್ನಿಗೆ ಹಿಂಸೆ ಕೊಡುತ್ತಲೇ ಪತಿ ಇದ್ದ

ಹಣಕ್ಕಾಗಿ ಪತ್ನಿ ಮನೆಯವರನ್ನ ಪೀಡಿಸುತ್ತಿದ್ದ

ಎರಡು ಮಕ್ಕಳನ್ನ ಹಣಕ್ಕಾಗಿ ಮಾರಾಟ ಮಾಡಿದ್ದ

ಹಬ್ಬದ ದಿನವೂ ಹಿಂಸೆ ನೀಡಿ ಕೊಲೆ ಮಾಡಿದ್ದಾನೆ ಎಂದು ಸಂಬಂಧಿಕರ ಆರೋಪ

ಆರೋಪಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹ

ಘಟನೆಗೆ ಸೈಫ್ ಉಲ್ಲಾ ಕುಟುಂಬಸ್ಥರೂ ಕಾರಣ ಎಂದು ಆರೋಪ

ಚನ್ನರಾಯಪಟ್ಟಣ ‌ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

02/06/2026

ಹಾಸನ

ಕೊಲೆ ಆರೋಪ ಹಿನ್ನೆಲೆ

ಹೂತಿದ್ದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಹಾಸನ ನಗರದ ಬಿಟ್ಟಗೋಡನಹಳ್ಳಿಯಲ್ಲಿ ಶವ ಹೊರಕ್ಕೆ

ಗುರುಮೂರ್ತಿ (45) ಅನುಮಾನಾಸ್ಪದವಾಗಿ ಸಾವನ್ನಪ್ಪಿರೋ ವ್ಯಕ್ತಿ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕು ಕೇರಳಾಪುರ ಗ್ರಾಮದ ಮೂಲದವರು

ಹಾಸನ ನಗರದ ತಣ್ಣೀರುಹಳ್ಳದಲ್ಲಿ ಹೊಟೆಲ್ ಬಿಸಿನೆಸ್ ಮಾಡ್ತಿದ್ದ ಗುರುಮೂರ್ತಿ

ಹೊಟೆಲ್ ನಲ್ಲಿ ಮೇ 17 ರ ರಾತ್ರಿ ಗಂಡ ಹೆಂಡತಿ ಹಾಗೂ ಮಕ್ಕಳ ನಡುವೆ ಗಲಾಟೆ

ಗಲಾಟೆ ನಡೆಯೋ ವಿಡಿಯೋ ಸಿಸಿ ಕ್ಯಾಮರಾದಲ್ಲಿ ವೈರಲ್

ಗಲಾಟೆಯಲ್ಲಿ ಗುರುಮೂರ್ತಿ ಮೇಲೆ ಹಲ್ಲೆ ಮಾಡೋ ಹೆಂಡತಿ‌ಮಕ್ಕಳು

ಗಲಾಟೆ ಬಳಿಕ ಕುಸಿದು ಬೀಳೋ ಗುರುಮೂರ್ತಿ

ಬಳಿಕ ಆತನನ್ನು ಚಿಕಿತ್ಸೆ ಕೊಡಿಸದೇ ಅಲ್ಲಿಯೇ ಮಲಗಿಸೋ ಗುರುಮೂರ್ತಿ ಹೆಂಡತಿ ಹಾಗೂ ಮಕ್ಕಳು

ಬೆಳಗಾಗುಷ್ಟರಲ್ಲಿ ಮಲಗಿದ್ದಾಗಲೇ ಸತ್ತುಹೋಗಿರೋ ಗುರುಮೂರ್ತಿ

ಬಳಿಕ‌ ದಿಢೀರ್ ಸಾವನ್ನಪ್ಪಿದ್ದಾನೆಂದು ಅಂತ್ಯಸಂಸ್ಕಾರ ಮಾಡಿದ ಕುಟುಂಬ

ಸಿಸಿ ಟಿವಿ ವಿಡಿಯೋ ನೋಡಿದ ಬಳಿಕ ಕುಟುಂಬಸ್ಥರಿಂದ ಅನುಮಾನ

ಗುರುಮೂರ್ತಿ ಸಾವಿಗೆ ಹೆಂಡತಿ‌ ವೀಣಾ ಹಾಗೂ ಆತನ ಮಗ ಕಾರಣ ಅಂತಾ ಆರೋಪ

ಅನುಮಾನಗೊಂಡು ಎಸ್ಪಿಗೆ ದೂರು‌ ನೀಡಿದ ಗುರುಮೂರ್ತಿ ತಾಯಿ

ತಾಯಿಯ ದೂರಿನನ್ವಯ ಇಂದು ಶವ ಹೊರತೆಗೆದು ಮರಣೋತ್ತರ ಪರೀಕ್ಷೆ

ಹಾಸನ ತಹಸೀಲ್ದಾರ್ ಗೀತಾ ಸಮ್ಮುಖದಲ್ಲಿ ಶವ ಹೊರ ತೆಗೆದು ಪರೀಕ್ಷೆ

02/06/2026

ಎಂ.ಎ. ನಾಗರಾಜ್ ಹುಟ್ಟುಹಬ್ಬ ಅಂಗವಾಗಿ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ, ಶಾಲಾ ಬ್ಯಾಗ್ ವಿತರಣೆ
ಬೇಲೂರು, ಜೂನ್ 2: ಸಮಾಜಸೇವಕ ಹಾಗೂ ಹೆಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ. ನಾಗರಾಜ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಸ್ನೇಹಿತರು ಮತ್ತು ಅಭಿಮಾನಿಗಳ ವತಿಯಿಂದ ಪಟ್ಟಣದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಲೇಖನಿ ಸಾಮಗ್ರಿ ಹಾಗೂ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪಠ್ಯೋಪಕರಣಗಳನ್ನು ವಿತರಿಸಿ ಮಾತನಾಡಿದ ಎಂ.ಎ. ನಾಗರಾಜ್, ತಾವು ಬಡ ರೈತ ಕುಟುಂಬದಲ್ಲಿ ಜನಿಸಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿದ್ದು, ಸಣ್ಣ ಉದ್ಯಮದಿಂದ ಬೆಳೆದು ಇಂದು ಸಮಾಜಸೇವೆ ಮಾಡುವ ಅವಕಾಶ ದೊರೆತಿರುವುದು ಜನರ ಆಶೀರ್ವಾದದಿಂದ ಎಂದು ಹೇಳಿದರು.
ಸರ್ಕಾರಿ ಶಾಲೆಗಳು ಮತ್ತಷ್ಟು ಉನ್ನತೀಕರಣಗೊಳ್ಳಬೇಕಿದ್ದು, ಗ್ರಾಮಗಳ ಅಭಿವೃದ್ಧಿಗೆ ಗುಣಮಟ್ಟದ ಸರ್ಕಾರಿ ಶಿಕ್ಷಣ ಅತ್ಯಗತ್ಯವಾಗಿದೆ. ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದಕ್ಕೆ ಈ ಶಾಲೆಯೇ ಸಾಕ್ಷಿಯಾಗಿದೆ ಎಂದು ತಿಳಿಸಿದರು.
ಶಾಲೆಯ ಅಭಿವೃದ್ಧಿಗಾಗಿ ತಮ್ಮ ಹೆಚ್‌ಡಿಸಿಸಿ ಬ್ಯಾಂಕ್ ವತಿಯಿಂದ ₹1 ಲಕ್ಷ ಅನುದಾನ ನೀಡುವುದಾಗಿ ಘೋಷಿಸಿದ ಅವರು, ಇದರಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು. ತಾವು ವೈಯಕ್ತಿಕವಾಗಿ ಹುಟ್ಟುಹಬ್ಬ ಆಚರಿಸುವವರಲ್ಲ, ಆದರೆ ಸ್ನೇಹಿತರು ಇಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದು ಕೃತಜ್ಞತೆ ವ್ಯಕ್ತಪಡಿಸಿದರು.

02/06/2026

ಬೇಲೂರು :

ಗ್ರಾನೈಟ್' ರಾಜಶೇಖರ್ 63ನೇ ಹುಟ್ಟುಹಬ್ಬ: ಅಭಿಮಾನಿಗಳಿಂದ ರಕ್ತದಾನ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ

ಸಮಾಜ ಸೇವಕ ಗ್ರಾನೈಟ್' ರಾಜಶೇಖರ್ ರವರ 63ನೇ ಜನ್ಮದಿನದ ಅಂಗವಾಗಿ ಅಭಿಮಾನಿಗಳು ಪಟ್ಟಣದ ಶ್ರೀ ಶಿವಕುಮಾರ ಸ್ವಾಮೀಜಿ ಕಲ್ಯಾಣ ಮಂಟಪದಲ್ಲಿ
ರಕ್ತದಾನ ಶಿಬಿರ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಆಚರಿಸಿದರು.

ತೆಂಕಲಗೋಡು ಯಶಳೂರು ಬೃಹನ್ ಮಠದ ಶ್ರೀ ಶ್ರೀ ಚನ್ನಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಬೇಲೂರು ತಾಲೂಕಿನಲ್ಲಿ ದೇವಸ್ಥಾನ, ಮಠ ಮಾನ್ಯಗಳು ಹಾಗೂ ಸಾಮಾಜಿಕ ಕಾರ್ಯಗಳಿಗೆ, ವಿದ್ಯಾರ್ಥಿಗಳು, ಬಡವರಿಗೆ ಸದಾ ಕೈಲಾದ ಸಹಾಯ ಹಸ್ತ ಚಾಚುತ್ತಾ ಮುಂಚೂಣಿಯಲ್ಲಿ ನಿಲ್ಲುವ ವ್ಯಕ್ತಿ ಎಂದರೆ ಸಮಾಜ ಸೇವಕ ಗ್ರಾನೈಟ್' ರಾಜಶೇಖರ್, ಅವರು
ತಮ್ಮ ಸಾಮಾಜಿಕ ಕಳಕಳಿ ಹಾಗೂ ಪ್ರೀತಿಯ ಮೂಲಕ ತಾಲೂಕಿನಾದ್ಯಂತ ಜನರ ಮನ ಗೆದ್ದಿರುವ ರಾಜಶೇಖರ್ ಅವರು ಇಂದು ತಮ್ಮ 63ನೇ ವಸಂತಕ್ಕೆ ಪಾದಾರ್ಪಣೆ ಮಾಡುತಿದ್ದು ಈ ಸುದಿನದಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ಜನ್ಮದಿನದವನ್ನು ವಿಶೇಷವಾಗಿ ಆಚರಿಸುತ್ತಿರುವುದು ಶ್ಲಾಘನೀಯವಾಗಿದೆ. ಅಲ್ಲದೆ ಸಂದರ್ಭ ಜಗದ್ಗುರು ರೇಣುಕಾಚಾರ್ಯ ಹಾಗೂ ಪಂಚಾಚಾರ್ಯರನ್ನು ಸ್ಮರಿಸುತ್ತಾ, ಗ್ರಾನೈಟ್ ರಾಜಶೇಖರ್ ಅವರಿಗೆ ಆಯುಷ್ಯ, ಆರೋಗ್ಯ ಮತ್ತು ಸುಖ-ಶಾಂತಿ ಸಿಗಲಿ ಎಂದು ಹಾರೈಸಿದ ಅವರು
ಹುಟ್ಟುಹಬ್ಬ ಎಂದರೆ ಕೇವಲ ಸಂಭ್ರಮಾಚರಣೆಯಷ್ಟೇ ಅಲ್ಲ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಅತ್ಯಂತ ಶ್ಲಾಘನೀಯವಾಗಿದ್ದು
ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಸಮಾಜಕ್ಕೆ ಮಾದರಿಯಾಗಿದೆ ಎಂದರು.

02/06/2026

ಮತದಾರರ ಪಟ್ಟಿ ಪರಿಷ್ಕರಣೆಗೆ ಸಕಲ ಸಿದ್ಧತೆ: ಎಡಿಸಿ ಜಗದೀಶ್ ಗಂಗಣ್ಣನವರ್


ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR)-2026 ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಜಗದೀಶ್ ಗಂಗಣ್ಣನವರ್ ತಿಳಿಸಿದರು.
ಬೇಲೂರು ತಾಲೂಕು ಕಚೇರಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ, ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಲಿದ್ದು, ರಾಜಕೀಯ ಪಕ್ಷಗಳ ಸಭೆಗಳು, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳು ಹಾಗೂ ಎನ್ಯುಮರೇಷನ್ ಫಾರಂಗಳ ಮುದ್ರಣ ಕಾರ್ಯಗಳು ನಡೆಯುತ್ತಿವೆ ಎಂದು ಹೇಳಿದರು.

02/06/2026

ಹಾಸನ ಜಿಲ್ಲಾ ಸರ್ಕಾರಿ ಅರೆ ಸರ್ಕಾರಿ ಹಾಗೂ ನಿಗಮ ಮಂಡಳಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ
ಮತ್ತು ಹಾಸನ ಜಿಲ್ಲಾ ರಾಜ್ಯ ಸರ್ಕಾರಿ ನೌಕರರ ಕೋ ಆಪರೇಟಿವ್ ಸೊಸೈಟಿ ವತಿಯಿಂದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಾಗೂ ಎರಡು ಸಂಘದ ಸರ್ವ ಸದಸ್ಯರ ಸಾಮಾನ್ಯ ಸಭೆಯನ್ನು ದಿನಾಂಕ 14.06.2026ರ ಭಾನುವಾರ ಬೆಳಿಗ್ಗೆ
10: 30ಕ್ಕೆ ಹಾಸನದ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ
ಈ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಶಾಖಾಮಠದ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿ ಅವರು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಗೌರವ ಉಪಸ್ಥಿತಿ ಶ್ರೀ ಎಸ್ ಷಡಾಕ್ಷರಿ ಅವರು ರಾಜ್ಯಾಧ್ಯಕ್ಷರು ಸರ್ಕಾರಿ ನೌಕರರ ಸಂಘ ಬೆಂಗಳೂರು
ಮುಖ್ಯ ಅತಿಥಿಗಳಾಗಿ ನಮ್ಮ ಹಾಸನ ಜಿಲ್ಲಾಧಿಕಾರಿಗಳಾದ ಶ್ರೀಮತಿ ಲತಾಕುಮಾರಿ ಅವರು ಶ್ರೀ ಶುಭಂ ಶುಕ್ಲ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಣ ಅಧಿಕಾರಿಗಳು ಭಾಗವಹಿಸಲಿದ್ದು ವಿಶೇಷವಾಗಿ ಹಾಸನ ಜಿಲ್ಲೆಯವರಾದ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳು ಶ್ರೀ ಡಾಕ್ಟರ್ ಕುಮಾರ್ ಐಎಎಸ್ ಇವರು ಭಾಗವಹಿಸಲಿದ್ದಾರೆ
ವಿದ್ಯಾರ್ಥಿಗಳಿಗೆ ಸ್ಪೂರ್ತಿ ನುಡಿ ನುಡಿಯಲು ಪ್ರೇರಣಾ ನುಡಿಯನ್ನು ನುಡಿಯಲು ಬರುತ್ತಿರುವವರು ಶ್ರೀ ಡಾ. ರಾಹುಲ್ ದೇವರಾಜ್ ಲೇಖಕರು ವೈದ್ಯರು ಸಮಾಜಸೇವಕರು ಆಗಮಿಸಲಿದ್ದಾರೆ
ಎಲ್ಲರೂ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘದ ಅಧ್ಯಕ್ಷರು ಕೆಎಂ ಶ್ರೀನಿವಾಸ್ ಮತ್ತು ಎo ಎನ್.ಪರಮೇಶ್ ಹಾಗೂ ಎಲ್ಲ ಪದಾಧಿಕಾರಿಗಳು ವಿನಂತಿಸಿರುತ್ತಾರೆ

02/06/2026

ಪತ್ರಕರ್ತರ ಸಂಘದ ಅನ್ನದಾಸೋಹ ಅತ್ಯಂತ ಪವಿತ್ರ ಕಾರ್ಯ ಮಾದರಿ ಕಾರ್ಯಕ್ರಮ

‘ಅನ್ನದಾಸೋಹ ೧೦೦’ ಶತದಿನೋತ್ಸವ-ಪ್ರತಿಭಾ ಪುರಸ್ಕಾರದಲ್ಲಿ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮೆಚ್ಚುಗೆ

ಹಾಸನ:
ಪತ್ರಕರ್ತರ ಸಂಘದಲ್ಲಿ ಅನ್ನದಾಸೋಹ ಕಾರ್ಯ ನಡೆಯುತ್ತಿರುವುದು ಅತ್ಯಂತ ಪವಿತ್ರವಾದ ಮಾದರಿ ಕಾರ್ಯಕ್ರಮವಾಗಿದ್ದು, ಜೊತೆಗೆ ಸಂಘದ ಪತ್ರಕರ್ತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಿರುವುದು ಉತ್ತಮವಾಗಿದೆ , ಕೆನರಾ ಗಿಗ್ ಸ್ಟಾರ್ ಅನೂಕೂಲಕರ ಯೋಜನೆ ಎಂದು ಶ್ರೀ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮೆಚ್ಚುಗೆವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿರುವ ಡಿವಿಜಿ ಸಭಾಂಗಣದಲ್ಲಿ ಸೋಮವಾರದಂದು ಆಯೋಜಿಸಲಾಗಿದ್ದ #ತ್ರಿವಿಧ #ದಾಸೋಹ* ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅನ್ನ, ಅಕ್ಷರ, ಆರೋಗ್ಯ ಎಲ್ಲರಿಗೂ ಅತ್ಯಂತ ಮುಖ್ಯ. ಶ್ರೀ ಮಠವೂ ಇದೇ ಹಾದಿಯಲ್ಲಿ ನಡೆಯುತ್ತಿದೆ. ಸಂಘದ ಕಾರ್ಯ ಶ್ಲಾಘನೀಯ ಎಂದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜೆ.ಆರ್. ಕೆಂಚೇಗೌಡ ಮಾತನಾಡಿ, ಸಂಘವು ಅನ್ನದಾಸೋಹ ಸೇರಿದಂತೆ ಹಲವು ಪತ್ರಕರ್ತರಪರ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ವಿಸ್ತರಿಸುವ ಉದ್ದೇಶ ಹೊಂದಿದೆ ಎಂದರು.

ಕಾರ್ಯಕ್ರಮದಲ್ಲಿ ಭಾರತ್ ಗ್ಯಾಸ್ ಏಜೆನ್ಸಿಯ ಕೃಷ್ಣ, ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಎನ್. ನಂಜುಂಡೇಗೌಡ, ಕಾರ್ಯದರ್ಶಿ ಕೆ.ಎಂ. ಹರೀಶ್, ಖಜಾಂಚಿ ಪ್ರಕಾಶ್, ಖುಷ್ವಂತ್, ಜಿ. ಪ್ರಕಾಶ್, ಬಿ.ಆರ್. ಬೊಮ್ಮೇಗೌಡ, ಪ್ರತಾಪ್ ಇತರರು ಉಪಸ್ಥಿತರಿದ್ದರು.

02/06/2026

ಸಕಲೇಶಪುರ

▪️ ಡಿವೈಎಸ್ಪಿ ನಡೆಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್ ನಾಗೇಂದ್ರ ಬೇಸರ
▪️ ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಆಕ್ರೋಶ
▪️ ಬಜರಂಗದಳ–ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರೊಂದಿಗೆ ನಡೆದುಕೊಂಡ ರೀತಿಗೆ ವಿರೋಧ
▪️ “ಯಾವುದೇ ಸಮಸ್ಯೆ ಇದ್ದರೂ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳಿ” – ಸಿದ್ದೇಶ್ ನಾಗೇಂದ್ರ
▪️ “ಕಾರ್ಯಕರ್ತರ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಕೆಲಸ ಪೊಲೀಸ್ ಇಲಾಖೆ ಮಾಡಬಾರದು”
▪️ ‘ಕುಶಾಲನಗರ ಚಲೋ’ಗೆ ಅನುಮತಿ ಪಡೆಯಲು ತೆರಳಿದ್ದ ವೇಳೆ ಘಟನೆ ಆರೋಪ
▪️ “ಡಿವೈಎಸ್ಪಿ ವರ್ತನೆಯಿಂದ ಹಿಂದೂ ಕಾರ್ಯಕರ್ತರ ಮನಸ್ಸಿಗೆ ನೋವಾಗಿದೆ”
▪️ “ಪ್ರಶ್ನೆ ಮಾಡುವವರನ್ನು ಬೆದರಿಸುವುದು ಸರಿಯಲ್ಲ”
▪️ “ನಮ್ಮ ಕಾರ್ಯಕರ್ತರು ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ”
▪️ “ಸಂಘಟನೆ ವಿಚಾರ ಬಂದರೆ ಹೋರಾಟಕ್ಕೂ ಸಿದ್ಧ” – ಬಿಜೆಪಿ ಜಿಲ್ಲಾಧ್ಯಕ್ಷ
▪️ ಮುಂದಿನ ದಿನಗಳಲ್ಲಿ ಕಾರ್ಯಕರ್ತರೊಂದಿಗೆ ಸಂಯಮದಿಂದ ವರ್ತಿಸುವಂತೆ ಪೊಲೀಸರಿಗೆ ಆಗ್ರಹ
▪️ ಗುರುವಾರ ನಡೆಯಲಿರುವ ‘ಕುಶಾಲನಗರ ಚಲೋ’ಗೆ ಅನುಮತಿ ನೀಡುವಂತೆ ಒತ್ತಾಯ

Address

MIG 25. 3 Road Floor Kuvempunagar Near KEB Office
Hassan
573201

Alerts

Be the first to know and let us send you an email when FAST TV Kannada posts news and promotions. Your email address will not be used for any other purpose, and you can unsubscribe at any time.

Contact The Business

Send a message to FAST TV Kannada:

Share